20 ಎಪ್ರಿಲ್ 2011

ಮುಖಪುಟ ವಿನ್ಯಾಸದ ಮೊದಲುಗಳು

                   ಎಷ್ಟೋ ದಿನಗಳ ಹಿಂದೆ ಎನ್ವಿ  ಪುಸ್ತಕ ಪ್ರಾಧಿಕಾರಕ್ಕೆ ಕವನ ಸಂಕಲನ ಕಳಿಸಿದ್ದೇನೆ , ಆಯ್ಕೆ ಆದರೆ ಪುಸ್ತಕದ ಮುಖಪುಟ  ಮಾಡಿಕೊಡ್ತಿಯಾ ಅಂತಾ ಕೇಳಿದಾಗ ನಾನೇ ಮಾಡಿಕೊಡ್ತಿನಿ ಬೆರೆಯಾರಿಗೂ ಕೊಡಬೇಡ ಎಂದು ಹೇಳಿದ್ದೆ. ಸ್ವತಃ ಅವನೆ ವಿನ್ಯಾಸಕಾರನಾಗಿದ್ದು ನನಗೆ ಅವಕಾಶ ಕೊಟ್ಟಿದ್ದ. ಆದರೆ ಪ್ರಾಢಿಕಾರದಿಂದ ಆಯ್ಕೆ ಆಗುವುದಕ್ಕೆ ಇನ್ನು ತುಂಬಾ ಸಮಯವಿದ್ದಿತು. ನಡುವೆಯೇ ಚೈತ್ರರಶ್ಮಿ ಯು ಕಥಾಸಂಕಲನ ತಯಾರಿಯಲ್ಲಿದ್ದಾಗ  ರಾಮಣ್ಣ ನಿಗೆ ನನ್ನ  ಶಿಫಾರಸ್ಸು ಮಾಡಿದ್ದು ಎನ್ವಿಯೆ. ಎನ್ವಿಯ ಪುಸ್ತಕದ ಸುದ್ದಿಯೇ ಇಲ್ಲದಿದ್ದಾಗ , ಮಧ್ಯದಲ್ಲಿಯಯೇ ಬಂದು ಮೊದಲೇ ಅಚ್ಚಾಗಿದ್ದು ಕನ್ನಡಿ ನೆರಳಿನ ಬಿಂಬ ಪುಸ್ತಕ , ನನ್ನ ಮೊದಲ ಪುಸ್ತಕ ಮುಖಪುಟ ವಿನ್ಯಾಸವಾಯಿತು. ನಂತರ ಪ್ರಾಧಿಕಾರದಿಂದ ಸಹಾಯಧನ ಪಡೆದ ಪ್ರವೀಣ್ ಸಂಪ ಹಾಗೂ ಆದರ್ಶ ಕೊಂಕೋಡಿ ಅವರ ಪುಸ್ತಕ ವಿನ್ಯಾಸ ಮಾಡುವ ಅವಕಾಶ ಸಿಕ್ಕಿ ಅವರ ಪುಸ್ತಕದ ಮುಖಪುಟ ವಿನ್ಯಾಸವು ಆಗಿ ಅಚ್ಚಿಗೆ ಸಿದ್ಧವಾಗಿದ್ದವು, ಆದರೆ ಮೊದಲು ಹೇಳಿದ ಎನ್ವಿಯ ಪುಸ್ತಕವೇ ಆಗಿರಲಿಲ್ಲ.. ಅಂತೂ ಇಂತೂ ಕೊನೆಗೂ, ಕಡೆಗೂ, ಎನ್ವಿಯ ಪುಸ್ತಕವು ಮುಗಿದು, ಅಂದುಕೊಂಡಂತೆ ಚನ್ನಾಗಿ ಮೂಡಿಬಂದಿದೆ, 

                 ಅನಿಮೇಶನ್  ವೆಬ್ ಸೈಟ್ ವಿನ್ಯಾಸದಲ್ಲಿ ಪರಿಣಿತಿ ಹೊಂದಿದ್ದರು , ಪುಸ್ತಕ ಪುಟ ವಿನ್ಯಾಸ ಮಾಡಿರಲಿಲ್ಲ... ಅಷ್ಟೊಂದು ಪರಿಣಿತಿಯು ಹೊಂದಿರಲಿಲ್ಲ  ಆದಾಗ್ಯು ನನ್ನ ಮೇಲೆ ನಂಬಿಕೆ ಇಟ್ಟು , ಅವಕಾಶ ನೀಡಿದಕ್ಕೆ ಎಲ್ಲರಿಗೂ ನನ್ನ ಧನ್ಯವಾದಗಳು..    

೩ ಪುಸ್ತಕಗಳು ಅಚ್ಚಾಗಿ ಪುಸ್ತಕ ಪ್ರಾಧಿಕರದ ಕೈ ಸೇರಿದೆ. 



" ಕನ್ನಡಿ ಬಿಂಬದ ನೆರಳು " ಕಥಾಸಂಕಲನ  ಚೈತ್ರರಶ್ಮಿ ಪ್ರಕಾಶನ   ( ಮೊದಲ ವಿನ್ಯಾಸ ) 







" ತೆರೆಬಾರದ ತೀರದಲ್ಲಿ ಮೂಡಿದ ಹೆಜ್ಜೆ ಗುರುತು "  ಕವನ ಸಂಕಲನ  - ಪ್ರವೀಣ್ ಸಂಪ , ಸಂಪ ಪ್ರಕಾಶನ





" ಸ್ಫೃಶ್ಯ " ಕಥಾಸಂಕಲನ  - ಆದರ್ಶ ಕೊಂಕೋಡಿ,  ಆಸರೆ ಪ್ರಕಾಶನ








" ಉಳಿಸಿಲ್ಲ ನಾನೇನನ್ನೂ ಕಲ್ಲಿನ ಹೃದಯದಂತೆ " ಕವನ ಸಂಕಲನ - ನಾಗರಾಜ ವೈದ್ಯ  ಚೈತ್ರರಶ್ಮಿ ಪ್ರಕಾಶನ







31 ಮಾರ್ಚ್ 2011

ನಿಮಗೆ ನಗೋದಿಕ್ಕು ಅರ್ಹತೆ ಇಲ್ಲ


        
  ಬೇರೆಯವರ ಅಳುವನ್ನು ನೋಡಿ ನಾವು ನಗೋ ಅಗತ್ಯ, ಅನಿವಾರ್ಯತೆ, ಅವಶ್ಯಕತೆ ಏನಿದೆ ?
ನಗೋದಿಕ್ಕೆ,  ಖುಶಿಯಗಿರೊಕೆ ಮನುಶ್ಯನಿಗೆ ಸಾವಿರ ಕಾರಣಗಳು ಸಿಗುತ್ತೆ, ನಿನ್ನೆಯೆಷ್ಟೆ ಮುಗಿದ ಬಾರತ ಪಾಕ್ ಕ್ರಿಕೆಟ್ ಪಂದ್ಯದಲ್ಲಿ ಸೋತ ಶಾಹಿದ್ ಅಫ್ರೀದಿಯ ಸೋತ ಮುಖ ನೋಡಿ ನಗುವ ಅಗತ್ಯ  ಕೆಲವರಿಗೆ ಏಕಿದೆ ಎಂದೇ ಗೊತ್ತಾಗೋದಿಲ್ಲ.. ಬಾರತ ಗೆಲುವಿನಲ್ಲಿಲ್ಲದ  ಸಂಭ್ರಮ ಅವರ ನೊವಿನ ಮುಖದಲ್ಲಿ ಹುಡುಕುವ ಅಗತ್ಯ ಏನಿದೆ ಇ ಭಾರತೀಯ ಯುವಕರಿಗೆ... ? ಸೂತಕದ ಕಳೆಯ ಮುಖ ನೋಡೀ , ಅವರ ಬಗ್ಗಿದ ತಲೆಯ ನೋಡಿ ಸೂಪರ್ ಎನ್ನುವದೇಕೇ?  ನಂಗೊತು ನಿಮ್ಗೆ ಸಿಕ್ಕಾಪಟ್ಟೆ ಕ್ರೀಯಾಶೀಲತೆ ಇದೆ ಅಂತ, ಅದ್ನ ಫೋಟೋಗ್ರಾಫಿಯಲ್ಲೋ , ಕಲೆಯಲ್ಲೋ ತೋರಿಸಿ, ಅದನ್ನ ಬಿಟ್ಟು ಮತ್ತೊಬ್ಬ ಮನುಶ್ಯನ ಕಣ್ಣಿರಿಗೆ ನಿಮ್ಮ ಹಲ್ಲುಗಳನ್ನ ತೋರಿಸಬೇಕಾಗಿಲ್ಲ. ತಮಾಷೆಗು ಒಂದು ಮಿತಿ ಇರಬೇಕು. .

ನಾನು ಇಲ್ಲಿ  ಪಾಕಿಸ್ತಾನವನ್ನಾಗಲಿ , ಶಾಹಿದ್ ಅಫ್ರೀದಿಯನ್ನಾಗಲಿ ಬೆಂಬಲಿಸುತ್ತಿಲ್ಲ. ಒಬ್ಬ ಸಾಮಾನ್ಯ ಮಾನವನಾಗಿ ಮತ್ತೊಬ್ಬ ಮಾನವನ ದುಖಃ ನೋಡಿ ನಗಬೇಡಿ ಅಂತಾ ಹೇಳ್ತಾ ಇದಿನಿ.  ಮತ್ತು ಅದು ನಮ್ಮ ಭಾರತೀಯ ಸಂಸ್ಕೃತಿನು ಅಲ್ಲ.  ಇಲ್ಲಿ ಮಾನವೀಯತೆ , ನೋವಿನ ಭಾವನೆ  ಬಗ್ಗೆ  ಹೇಳ್ತಾ ಇದಿನಿ.. ಇದೇ ನಿನ್ನೆ ಭಾರತವು ಸೋತಿದ್ದರೆ  ನಿವು ಧೋನಿ ಮುಖ ತೋರಿಸಿ ಸೂಪರ್ ಅಂತಿದ್ರಾ... ? ಎನು ಮಾಡ್ತಾ ಇದ್ರಿ ...? ಆಟ ಅಂದಮೇಲೆ ಒಬ್ಬರು  ಸೋಲಲೇಬೇಕು , ಒಬ್ಬರು ಗೆಲ್ಲಲೇ ಬೇಕು,  ನಿವೇ ಎಷ್ಟುಸಲ ಸೋತಿಲ್ಲ ..ಆವಾಗ ನಿಮ್ಮ ನೋಡಿ ನಕ್ಕರೆ ನಿಮಗೆನನ್ನಿಸುತಿತ್ತು ಅಂತ.  ನಿಮ್ಗೆ ಮಾಡಲಿಕ್ಕೆ  , ಟೈಂ ಪಾಸು ಮಾಡ್ಲಿಕ್ಕೆ , ಹರಟೆ ಹೋಡಿಯಲಿಕ್ಕೆ , ಒಂದು ವಿಷ್ಯ ಬೇಕಷ್ಟೆ,  ಸಾಮಾಜಿಕ ತಾಣಗಳು ಇಂತವರ , ಆಡ್ಡೆಗಳಾಗಿವೆ,  ದೊಡ್ಡ ದೊಡ್ಡ ನಗರಗಳಲಿದ್ದು .. ವಿದ್ಯಾವಂತರಾಗಿದ್ದು.  ತಿಳಿದವರಾಗಿದ್ದು, ಹಳ್ಳಕ್ಕೆ ಬಿದ್ದೋರಿಗೆ ಯಾಕೆ ಕಲ್ಲು ಹೊಡಿತಿರಿ ಅಂತಾನೆ ಅರ್ಥ ಆಗಲ್ಲ...

ಇಂತಾ ಕೆಲಸ ಮಾಡೊರು ಮತ್ಯಾರು ಅಲ್ಲ ..  ನಮ್ಮ ನಿಮ್ಮಂತ ಯುವಕರು ಜವಾಬ್ಧಾರಿ ಇದ್ದು, ಎಲ್ಲ ತಿಳಿದವರೇ ಮಾಡೋದು.  ಬಹುಶಃ ಸೋಲಿಲ್ಲದ ಸರದಾರ ಅಂತ ಅವ್ರಿಗೆ ಅವ್ರೆ ಅಂದ್ಕೊಂಡ್ಬಿಟಿದಾರೆ.



ರಾಜೀವ್ ಕಾರೆಮನೆ




13 ನವೆಂಬರ್ 2010

(ನ)ಕರಾರು.....

(ನ)ಕರಾರು.....

ಜೋಡಿ ಕಣ್ಣ ಬಟ್ಟೆ ಕಟ್ಟಿ
ಒಲವೆಲ್ಲಿ ಎಂದು ಕೇಳುವರುಂಟೇ!?
ರಾಜನನುಮತಿ ಪಡೆದು
ಕಳ್ಳ ಸಾಗಾಣಿಕೆ ಮಾಡುವುದುಂಟೇ !?
ಕಾಣದ್ದು ಕಂಡರು
ಸಾಕ್ಷಿ ನುಡಿವವರು ಬೇಕೆಂಬುವರೇ
ಅತೀತ ಅನುಭವದ ನಡುವೆಯು
ಕರಾರಿಗೆ ಗಂಟು ಬೀಳುವರುಂಟೇ !?
ಹುಟ್ಟೂ ಸಾವಿಗು ಸ್ಥಳ
ಮುಹೂರ್ತ್ ನೋಡುವರುಂಟೇ !?
ಹರಿವನೀರ ಕೂಡಿಟ್ಟು
ಸೋಗಸ ಹುಡುಕುವರುಂಟೇ!?
ಮುಂದಿನ ಸಾವ ನೆನೆದು
ಇಂದಿನ ನಗುವ ಬಿಡುವರುಂಟೇ !?
ಸಾಗರದ ಮೊರೆತ ನಿಲ್ಲಿಸುವರುಂಟೇ !?
ಕರಾರು ಪತ್ರ ಸಹಿ ಮಾಡಿ
ಕಟ್ಟಳೆ ವಿಧಿಸಿ ಪ್ರೀತಿಸುವ-ವರುಂಟೇ !?


ನಿನ್ನವನು.....  

ಹೊತ್ತು ಕಳೆಯುವತನಕ ......













ಹೊತ್ತು ಕಳೆಯುವತನಕ ......

ನೊಂದಾಯಿಸಲು  ಮರೆಯಬೇಡ  ಈ   ನನ್ನ ,
ಹೃದಯವನ್ನು  ನಿನ್ನ  ಕಣ್ಣೊಳಗೆ ,
ಕಾದಿರುವೆ  ಉಚಿತ  ಪ್ರವೇಶಕ್ಕೆ ,
ಒಮ್ಮೆ  ಬರಮಾಡು  ನಿನ್ನೊಳಗೆ  ..

ನಿನ್ನ  ಹೃದಯದ  ಕಾತೆ ಯೊಳಗೆ  
ಇಡಲೇ  ನನ್ನ  ಕನಸ  ಠೇವಣಿಯ
ಪಾವತಿಸಲೇ  ನೆನಪುಗಳ  ನಗದನ್ನ ?,

ಕೈಗಡ  ನೀಡು  ಏ  ಹುಡುಗಿ
ನಿನ್ನ ಬೆರಳ ನುಣುಪ
ಮಳೆಯಕಾಡಿನಲ್ಲಿ ನಾನೊಮ್ಮೆ
ಹಿಡಿದು ನೆಡೆವೆ

ಬೆಳಕ  ಹಿಡಿದು  ಅಳತೆ   ಮಾಡಿ  
ಪೋಣಿಸೋಣ  ಜೊತೆಗೂಡಿ ,
ಕೂತು  ಮರದ  ಕೆಳಗಿಂದು  
ಹೊತ್ತು  ಕಳೆಯುವತನಕ  ......


ನಾನು ...........

ಕನವರಿಕೆ




ಕನವರಿಕೆ 





ರಾತ್ರಿಯ ಮದ್ಯದಲಿ, ಎಚ್ಚರವಾದಾಗಲೊಮ್ಮೆ 
ಎದ್ದು ಉ.... ಹೊಯ್ದು ಬರುವದರೊಳಗೆ
ನಿ ಪಕ್ಕ  ಹಾಸಿಗೆಯಲಿ, ಘಾಢ ನಿದ್ರೆಯಲಿ 
ಹಾಗೆ ಬೆಳದಿಂಗಳು ಕಣ್-ಮುಚ್ಚಿ ಮಲಗಿರುವಂತೆ 
ಮಡದಿ  ನಿ ಹೂವರಳುವ ಸದ್ದಿನಂತೆ
ಏಳುಪ್ಪರಿಗೆಯ ರಾಣಿ ಕೆನ್ನೆಯಡಿ 
ಬಿಳಿ ಮಿದು ಕೈಗೊತ್ತಿ  
ಜಗದ ಪ್ರೀತಿಯಲ್ಲಿ ಮಿಂದವಳಂತೆ 
ನಿ ಮಲಗಿರುವೆ..


ಏನೆಲ್ಲಾ ಕನವರಿಸಿ ನಾ ಬೆಳದಿಂಗಳ 
ಪಕ್ಕ  ಮಲಗಿ ಭ್ರಮಿಸಿದಂತೆ ....


-ನಿನ್ನವನು

11 ಎಪ್ರಿಲ್ 2010

...........ವಳಿಗೆ

ಮಳೆಗಾಲದಲ್ಲಿ  
ಶಾಲೆಗೆ  ಹೋಗುವಾಗ  
ಜಾರಿಬಿದ್ದವಳಿಗೆ  
ಅಣ್ಣನ  ಜೊತೆ  ನೆಲ್ಲಿ  ಮರ  
ಹತ್ತಲು  ಹೋಗಿ  ಕಾಲಿಗೆ  
ಗಾಯ ಮಾಡಿಕೊಂಡವಳಿಗೆ  
ಬೆಳಿಗ್ಗೆ  ಬೇಗ  ಎದ್ದು
ಮನೆ  ಕೆಲಸದಲ್ಲಿ  
ಅಮ್ಮನಿಗೆ  ಸಹಾಯಮಾಡಿ  
ಬಿಸಿಬಿಸಿ  ಕುರುಂ  ಕುರುಂ  ದೋಸೆ  ಬೇಕೆಂದು  
ಮೊದಲು  ಬಂದು  ಕುಳಿತು
ಹಳೆ ತಣಿದ  ದೋಸೆ  ತಿಂದವಳಿಗೆ 
ಅಮ್ಮನ  ಜೊತೆ  ಅಜ್ಜನ  ಮನೆಗೆ  ಹೋಗುವ 
ಬಸ್ಸಿನಲ್ಲಿ  ಕಿಡಕಿ  ಸೀಟಿಗಾಗಿ  ಹಟಮಾಡಿದವಳಿಗೆ   
ಅಮ್ಮನ  ತೊಡೆಮೇಲೆ  ಕುಳಿತವಳಿಗೆ  
ಅಪ್ಪ ಯೆಲ್ಲಾಪುರದಿಂದ  ಬರುವಾಗ  
ಬಿಸ್ಕೀಟು  ತಂದು  ಅಣ್ಣನ  ಕೈಗೆ  ಕೊಟ್ಟೆ  
ಕೊಟ್ಟಾಗ  ಸಣ್ಣ  ಕಣ್ಣು  ಮಾಡಿದವಳಿಗೆ  
ಬಿಸಿಲಿದೆ  ಎಂದು  ಮಳೆಗಾಲದಲೂ  ಕೊಡೆ  ತರದೇ ,
ಶಾಲೆಯಿಂದ  ಮನೆಗೆ  ಹೋಗುವಾಗ  
ಮಳೆಸಿಕ್ಕಿ  ಗೆಳತಿ  ಕೊಡೆಯಲ್ಲಿ  ಅರ್ಧನೆಂದು  ಹೋದವಳಿಗೆ  
ಮೊದಲ  ಸಲ  ಕೈಯ್ಯಲ್ಲಿ  
ಪೊಂಡ್ಸ್  ಪೌಡರ್  ಹಿಡಿದು  
ಉಹ್ಹ್ಹ್ಹಹ್ಹ್  ಹಯಾ  ಎಂದು  ಪರಿಮಳ  ನೋಡುವಾಗ  
ಮೂಗೊಳಗೆ  ಪೌಡರ್  ಹೋದವಳಿಗೆ  
ಅಪ್ಪ  ಕಾಲ್ಗೆಜ್ಜೆ  ತಂದು  
ಅಮ್ಮನ  ಕೈಲಿ  ಕಟ್ಟಿಸಿದಾಗ  
ಸುಮ್ನೇ  ಕಾಲು ನೆಲಕ್ಕೆ  ಧಿಂ 
ಅಂದವಳಿಗೆ .......


ಬರಗಾಲ ಹಳ್ಳಿಯ  
ಬಣ್ಣಗೆಟ್ಟ ಕೂದಲಿನ 
ನೀರು ಹುಡುಕಿದ ತುಟಿಯ 
ಮುಗ್ಧ ಮುತ್ತು.......





ತೀಕ್ಷಣ ಪ್ರೀತಿಯಿಂದ ..........

8 ಎಪ್ರಿಲ್ 2010

ಮುಖ ತೋರಿಸದ ಹುಡುಗಿ





















ಎಲ್ಲಿ ಹೋದಳು ಮುಖತೋರಿಸದ ಹುಡುಗಿ ?


ತವರು ಮನೆಗೆ ಹೋದಳೇ
ಎಂದರೆ ಇನ್ನು ಮದುವೆಯಾಗಿಲ್ಲ
ಹುಡುಗ ಕೈ ಕೊಟ್ಟದಕ್ಕೆ ಕರಿ ಕೋಣೆಯಲ್ಲಿ
ಒಬ್ಬನೇ ಅಳುತ್ತ ಕೂತಳೇ
ಉಹೂಂ ಇನ್ನು ಹುಡುಗನೇ ಸಿಕ್ಕಿಲ್ಲ
ಓದಿ ಮುಗಿಸಲಾರದಷ್ಟು
ಪದ್ಯಸಿಕ್ಕಿತೇ ?
ನೀರು ತರಲು ಹೋದವಳು ಬರಲಿಲ್ಲವೇ
ಸಾಧ್ಯ ಇಲ್ಲ , ಗೆಳತಿ (ಆ) ಕೆಲಸ ಮಾಡಲ್ಲ
ಜ್ವರ ಬಂದು ಮಲಗಿದಳೇ ?
ಇಷ್ಟೊತ್ತಿಗೆ ಎದ್ದಿರಬೇಕಿತ್ತು
ಸಮಯದ ಅಭಾವವವೇ
ನನ್ನನ್ನ ಕೇಳುತ್ತಿದ್ದಳು


ಚಂದ್ರನೇನಾದರು ಅಪಹರಿಸಿದನೇ
ಅಸೂಯೆಯಿಂದ ?
ಸೂರ್ಯನ ಪ್ರೀತಿ ಕಣ್ಣು
ಸುಟ್ಟು ಹಾಕೀತೇ?
ಬೇಸಿಗೆ ಮಳೆಯ ಅಮಲು
ನಿನ್ನ ಕರೆದೊಯ್ದೀತೇ
ಮಳೆಗೆ ಚೈತ್ರ ಚಿತ್ತಾರದ
ನಿನ್ನ ರಂಗೋಲಿ ಅಳಿಸಿತೆ
ಸಾಗರದಲ್ಲಿ ಮುತ್ತು ಮುಗಿದಿದೆಯೆಂದು
ನೀನು ಹೋದೆಯಾ?


ನನ್ನ ಯಾವ ಮಾತು
ಬೈದಂತೆ ಅನ್ನಿಸಿತು ?
ನನ್ನ ನಗು ನಿನಗೆ
ಅಪಮಾನವಾಯಿತಾ?
ಅಮ್ಮನ ಮಡಿಲು ನೆನಪಾಯಿತಾ?
ಆಗುಂಬೆಯ ಮಳೆಯು
ಕನಸಾಯಿತಾ ?
ಬೇಂದ್ರೆ ಕಾರಂತರ ಪದ್ಯ
ಗುನು ಗುನಿಸುತ್ತಿರುವಯಾ?


ಮಾತಾಡು ಮುಖ ಕಾಣದ ಹುಡುಗಿ 
ಎಲ್ಲಿ ಅಡಗಿರುವೆ ......?



ಪ್ರತೀಕ್ಷಣ ಪ್ರೀತಿಯಿಂದ ..........

13 ಜನವರೀ 2010

ಸಾತೊಡ್ಡಿ ಜಲಪಾತ



ಪ್ರವಾಸಿಗರು,
ಸತೀಶ್, ವಿಷು, ರಾಜೀವ್

ಮಳೆಯ ಒಂದು ದಿನ



ನಮ್ಮ  ಹಳೆ  ಮನೆಯ  ಹತ್ತಿರದ ಮಳೆಯ ಒಂದು ದಿನ

28 ಡಿಸೆಂಬರ್ 2009

I wanna grow old with you



ನನಗೆ  ಅತ್ಯಂತ ಇಷ್ಟವಾದ ಪದ್ಯದಲೊಂದನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ

Another day
Without your smile
Another day just passes by
But now I know
How much it means
For you to stay
Right here with me

The time we spent apart will make our love grow stronger
But it hurt so bad I can't take it any longer

I wanna grow old with you
I wanna die lying in your arms
I wanna grow old with you
I wanna be looking in your eyes
I wanna be there for you
Sharing everything you do
I wanna grow old with you

A thousand miles between us now
It causes me to wonder how
Our love tonight remains so strong
It makes our risk right all along

The time we spent apart will make our love grow stronger
But it hurt so bad I can't take it any longer

I wanna grow old with you
I wanna die lying in your arms
I wanna grow old with you
I wanna be looking in your eyes
I wanna be there for you
Sharing everything you do
I wanna grow old with you

Things can come and go I know but
Baby I believe
Something's burning strong between us
Makes it clear to me

I wanna grow old with you
I wanna die lying in your arms
I wanna grow old with you
I wanna be looking in your eyes
I wanna be there for you
Sharing everything you do
I wanna grow old with you


WESTLIFE 


ಪ್ರತೀಕ್ಷಣ ಪ್ರೀತಿಯಿಂದ ..........